Wednesday, September 5, 2018

Austin Kirtan ಆಸ್ಟಿನ್ ಕೀರ್ತನ್

ಆಸ್ಟಿನ್ ಕೀರ್ತನ್

ಟೆಕ್ಸಾಸ್ ರಾಜಧಾನಿಯಾದ ಆಸ್ಟಿನ್ನಲ್ಲಿ ಧ್ಯಾನ ಹಾಗೂ ಕೀರ್ತನೆ ಮಾಡುವ E-ಅಂಚೆ (E-mail) ಕರೆಯೊಂದು ನಮಗೆ ಬಂದಿತು. ನಾವು ಅತಿ ಕುತೂಹಲ ಹಾಗೂ ಆಶ್ಚರ್ಯದಿಂದ ಕೂಡಿ ಅಲ್ಲಿ ಏನು ನಡಿಯುತ್ತದೆ ಎಂದು ತಿಳಿದುಕೊಳ್ಳಲು ಹಾಗೂ ಭಾಗವಹಿಸಲು ಹೋದೆವು. ಮಹಡಿಯ ಮೇಲೆ ಒಂದು ಕೋಣೆಯಲ್ಲಿ ಸುಮಾರು  ಇಪ್ಪತ್ತೈರಿಂದು ಮೂವತ್ತು ಮಂದಿ ಅಮೇರಿಕನ್ನರು ಸೇರಿದ್ದರು. ವಿದ್ಯುತ್ ದೀಪಗಳಿಂದ ಕೂಡಿದ ರಂಗ ಮಂಚ ಒಂದು ತಯಾರಾಗಿತ್ತು. ವಾದ್ಯ ನುಡಿಸುವವರೂ ಬಂದಿದ್ದರು. ಸಸ್ಯಾಹಾರಕ್ಕಿಂತ ಒಂದು ಹೆಜ್ಜೆ ಮುಂದಿರುವ ವೀಗನ್ ಊಟವನ್ನು ಅಲ್ಲಿರುವ ಜನರು ಮಾಡುತ್ತಿದ್ದರು. ಓರ್ವ ಮಹಿಳೆಯೊಬ್ಬಳು ನಮ್ಮನ್ನು ಕಂಡು ನಾವು ಊಟವನ್ನು ತೆಗೆದುಕೊಳ್ಳುವಂತೆ ಸೂಚಿಸಿದಳು. ಭೋಜನ ಸ್ವಾದಿಷವಾಗಿಯೂ ಹಾಗು ತಿಂದರೂ ಹೊಟ್ಟೆ ಭಾರ ಆಗದಂತೆ ಇತ್ತು. ಅನಂತರ ವೀಗನ್ ಐಸ್ ಕ್ರೀಮ್ ಕೂಡ ಇತ್ತು.

ಏಪ್ರಿಲ್ ಎಂಬಾಕೆ ನನಗೆ ನಮಸ್ತೆ ಎಂದು ಕೈ ಜೋಡಿಸಿ ನನ್ನ ಹೆಸರು ಗುರುತಿಸಿ ಮಾತನಾಡಿಸಿದಳು. ಕೀರ್ತನೆಯು ಶುರುವಾಯಿತು ಓಂ ಮಂತ್ರದಿಂದ. ಆಕೆಯೇ  ಈ ಕಾರ್ಯಕ್ರಮದ ಮುಖ್ಯ ಗಾಯಕಿ ಹಾಗೂ ನಿರ್ವಾಹಕಳು. ವಾದ್ಯಗಳೊಂದಿಗೆ ಕೂಡಿದ ಕೀರ್ತನೆಯಿಂದ  ಒಂದು ತರಹದ ರೋಮಾಂಚನ ಅನುಭವವಾಯಿತು. ಅಲ್ಲಿದ್ದ ಜನರೆಲ್ಲಾ ಆ ಬ್ರಹ್ಮನಲ್ಲಿ ಲೀನರಾದವರಂತೆ; ಬೇರೆಯೇ ಲೋಕಕ್ಕೆ ಕರೆದೊಯ್ದವರಂತೆ ತೋರುತ್ತಿದ್ದರು. ಹರೇ ಕೃಷ್ಣ ಹರೇ ರಾಮ ಮಂತ್ರಕ್ಕಂತೂ ಎಲ್ಲರೂ ಆನಂದ ಅನುಭವದಲ್ಲಿ ಮುಳುಗಿ ಸಂತಸದಿಂದ ಕುಣಿಯ ತೊಡಗಿದರು. ಬಹಳ ಸೊಗಸಾಗಿತ್ತು ಆ ದೃಶ್ಯ. ಸುಮಾರು  ಒಂದೂವರೆ ಘಂಟೆಯ ಕೀರ್ತನೆಯ ಬಳಿಕ ಎಲ್ಲರಿಗೂ  ವಂದನೆ ಸಲ್ಲಿಸಿ ಕಾರ್ಯಕ್ರಮವನ್ನು ಮುಗಿಸಿದರು.  ನಾವು ಅತಿ ಅಚ್ಚರಿ ಹಾಗು ಸಂತೋಷದಿಂದ ಹೊರಗೆ ಬಂದೆವು. ನಮ್ಮ ಸನಾತನ ಧಾರ್ಮವು ಎಲ್ಲಿಯೋ ಚಿಗುರುವುದು ಎಂಬ ಭರವಸೆಯಿಂದ  ಮನ ತೃಪ್ತವಾಯಿತು.

-ಮಾನಸಿ ಬಳಗೆರೆ

2 comments:

lightofoct said...

ತುಂಬ ಸೂಗಸಾಗಿ ಬರೆದಿದ್ದೀರ !!

Unknown said...

Very nice mansi keep going